Friday, October 3, 2014

Hi Ghalib......

ಈ ಹೊತ್ತಿನಲ್ಲಿ
ನಿನ್ನ ಭೇಟಿ
ಬೇಡವಾಗಿತ್ತು
ಗಾಲಿಬ್....

ಪ್ರೀತಿ, 
ಪ್ರೀತಿಯಲ್ಲ,
ಪ್ರೀತಿಯ ಕವನ ಅದಲ್ಲವೇ ಅಲ್ಲ!!
ಹ ಹ! ಕವನ ಮಾತ್ರ
ಪ್ರೀತಿಯ ಕುರಿತು ಎಂದೆ ....

ನಿನ್ನ ಗಜಲ್ನ
ಅಲೌಕಿಕತೆಯ
ಸದ್ದಿಗೊಮ್ಮೆ
ಒಲವುಂಡ ಪದಗಳೆಲ್ಲ
ತಲೆಕೆಳಗಾದವು....

ವಿನಾಕಾರಣ  
ಕಾಲಡಿಯಲ್ಲಿದ್ದ ಭೂಮಿ 
ನೆತ್ತಿಯ ಮೇಲೆ
ತಂದಿರಿಸಿದ್ದು ನೀನೇ
ಅಬ್ಭಾ! ಹೃದಯ ಭಾರ ....

ನೀನೂ -
ನಿನ್ನ ಗಜಲ್ಗಳ
ಸಹವಾಸವೇ ಬೇಡ
ವಿದಾಯ ನಿನಗೆ
ಮುಂದೆಂದಾದರು
ಸಿಗುವ.....

......... ಇಲ್ಲ,ಆವರಿಸಿಯೇಬಿಟ್ಟೆ!
ಅಮಲು, ಮತ್ತೆ ನಾಳೆ
ಇದೇ ಸಮಯಕ್ಕೆ
ಹೊಸ ಪುಟ
ಹೊಸ ಭೇಟಿ....

2 comments:

  1. ನಿಮ್ಮ ಮಾತು ನಿಜ, ಗಾಲಿಬ್ ಗಜಲುಗಳೆಲ್ಲ ಪ್ರೇಮಕ್ಕೆ ಸಂಬಂಧಪಟ್ಟವಾದರೂ ಸಹ, ಅವು ಬರೀ ಪ್ರೇಮದ ಅಥವ ಅದರ ವೈಫಲ್ಯದ ಹೂರಣಗಳಲ್ಲ. ಅಲ್ಲಿ ಅಲೌಕಿಕವಾದದ್ದೇನೋ ನಮ್ಮ ಮನಸ್ಸಿನಾಳಕ್ಕೆ ಇಳಿದು ಮತ್ತೇನನ್ನೋ ಹೊಳೆಯುವಂತೆ ಮಾಡುತ್ತದೆ.

    ಅವನ ಗಜಲುಗಳು ನಮ್ಮನ್ನು ಸಂಪೂರ್ಣ ಆವರಿಸಿಯೇಬಿಡುವ ನಿಜವಾದ ಅಮಲಿನಂತವಹವೇ.

    best of best:
    "ನಿನ್ನ ಗಜಲ್ನ
    ಅಲೌಕಿಕತೆಯ
    ಸದ್ದಿಗೊಮ್ಮೆ
    ಒಲವುಂಡ ಪದಗಳೆಲ್ಲ
    ತಲೆಕೆಳಗಾದವು...."

    (ನನಗೆ ಬಹುವಾಗಿ ಕಾಡಿದವ ಈ ಗಾಲಿಬ್. ಸುಮಾರು 50 ಗಜಲುಗಳನ್ನು ಕನ್ನಡಕ್ಕೆ ಹೊಸೆಯುವ ವ್ಯರ್ಥ ಪ್ರಯತ್ನವನ್ನು ಬಹಳ ಹಿಂದೆಯೇ ಮಾಡಿದ್ದೆ. ಒಂದು ಭಾವಾನುವಾದ (?) ಹಾಯ್ ಬೆಂಗಳೂರಿನಲ್ಲೂ ಬೆಳಕು ಕಂಡಿತ್ತು!)

    ReplyDelete
  2. ಸುಭಾನ್ ಅಲ್ಲಾ!

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...